Vidyopaasana Education Trust [VET]

Learning through Exploration 

Vidyopaasana Education Trust (VET) seeks to assist students in government schools who study in vernacular mediums through the use of exploration-based learning techniques 


The Challenge: Access to quality education

 For children from disadvantaged backgrounds, public school education stands as their sole recourse. Regrettably, the quality of education within these institutions, particularly concerning essential skills and educational achievements, is profoundly inadequate. Graduates from these schools often lack confidence and struggle to pursue their aspirations, hampering their ability to lead fulfilling lives. The root of these issues seems to stem from outdated teaching methods, which prioritize memorization for exam success rather than fostering genuine comprehension. Consequently, a deficiency in robust conceptual understanding remains a bane of the prevailing education system.

Need of the hour: An innovative and integrated pedagogical approach 

In our technology-driven world, proficiency in secondary school-level mathematics is essential. Achieving this proficiency requires an intuitive pedagogical approach rooted in fundamental principles, nurturing the natural curiosity of young minds. Such an approach, designed to ignite children's exploratory spirit, holds promise for productivity. It could potentially draw in students who may not otherwise consider Science, Technology, Engineering and Mathematics (STEM) subjects, or at the very least, cultivate a solid grasp and appreciation for mathematics and analytical thinking.

Learning through exploration: Vidyopaasana Education Trust (VET) 

VET provides the basic facilities for a student to perform laboratory and field-based experiments. Students are encouraged to collaborate with peers, inquire, and iterate experiments, adjusting parameters as needed. They meticulously document and analyze results using both intuitive and mathematical tools, ensuring a profound understanding of phenomena and the underlying concepts. This experiential learning fosters a deeper grasp of abstract concepts. Notably, this approach integrates science and mathematics seamlessly, echoing Galileo's notion that "The book of nature is written in the language of mathematics." VET aims to support students studying in vernacular medium within government schools. These activities are carefully structured to complement rather than disrupt normal school routines. This integration enriches the traditional education system over time, enhancing its overall efficacy.

End game: Social Impact 

Experiencing such hands-on learning methods can yield the following outcomes: 1. Establishes a robust educational groundwork, equipping students to pursue diverse fields of interest. 2. Cultivates self-assurance, instilling a sense of worth and empowerment in students who may otherwise lack such opportunities. 3. Encourages parents to enroll their children in government schools, alleviating financial strain for a significant portion of society. VET's facilities are presently situated in Mundkur village, Udupi District, Karnataka. Efforts are ongoing to expand this cost-effective initiative.

For further details, please reach out to us at info@vidyopaasana.org 

Connect with us on linkedIn Vidyopaasana Education Trust [VET] | LinkedIn 

ಸಾರ್ವಜನಿಕ ಶಿಕ್ಷಣದ ಗುಣಮಟ್ಟ : ಸಮಾಜಕ್ಕೊಂದು ಸವಾಲ್

ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸರಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯು ಏಕೈಕ ಆಶ್ರಯವಾಗಿದೆ. ದುರದೃಷ್ಟವಶಾತ್, ಈ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಾ ಇರುವುದನ್ನು ನಾವೆಲ್ಲರು ಗಮನಿಸಿದ್ದೇವೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದು, ಬಹುಮುಖ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದು ಮತ್ತು ನೈಸರ್ಗಿಕ ಕುತೂಹಲವನ್ನು ಕೆರಳಿಸುವುದರಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ.  ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಜನೆಯ ಸಂಕಲ್ಪ ನಶಿಸಿಹೋಗಿ ಶಾಲಾ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುವುದನ್ನು ನಾವು ನೋಡಬಹುದು. ಆಧುನಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸದಿರುವುದು, ಪರೀಕ್ಷಾ ಫಲಿತಾಂಶವನ್ನು ಮುಂದಿಟ್ಟು ಕಂಠಪಾಠಕ್ಕೆ ಆದ್ಯತೆ ನೀಡುವುದು ಇಂದಿನ ಶಾಲಾ ಶಿಕ್ಷಣ ಮಟ್ಟದ ಕ್ಷೀಣತೆಗೆ ಮುಖ್ಯ ಕಾರಣಗಳಿರಬಹುದು ಎಂದು ಅಂದಾಜು ಮಾಡಲಾಗಿದೆ. ವಿದ್ಯಾಭ್ಯಾಸದ ಮೂಲ ಉದ್ದೇಶವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಮಾನವೀಯ ಮೌಲ್ಯಗಳನ್ನು ಬೇರೂರಿಸುವುದು. ಇಂದಿನ ಸಾರ್ವಜನಿಕ ಶಾಲಾ ಶಿಕ್ಷಣವು ಇದನ್ನು ಪೂರೈಸುವುದರಲ್ಲಿ ವಿಫಲವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಈ ನ್ಯೂನತೆಗಳನ್ನು ಬಗೆಹರಿಸುವುದರಲ್ಲಿ ಸಮಾಜ ಮಹತ್ತರವಾದ ಪಾತ್ರವನ್ನು ವಹಿಸಬೇಕೆಂಬುದು ನಮ್ಮ ಅಭಿಪ್ರಾಯ.

ಶಾಲಾ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ : ಇಂದಿನ ಅವಶ್ಯಕತೆ.

ಇಂದಿನ ಜೀವನದ ಪ್ರತಿಯೊಂದು ಆಗುಹೋಗುಗಳು ವಿಜ್ಞಾನ ಮತ್ತು ತಂತ್ರಜ್ಞಾನದ ತಿಳುವಳಿಕೆಯ ಮೇಲೆ ಅವಲಂಬಿಸಿರುತ್ತವೆ. ಉನ್ನತ ಶಿಕ್ಷಣಾಭ್ಯಾಸ ಮತ್ತು ಉದ್ಯೋಗವಕಾಶಕ್ಕೂ ಇವುಗಳ ಅರಿವು ಅತ್ಯಗತ್ಯ. ಕನಿಷ್ಠ ಪಕ್ಷ, ಶಾಲಾ ಮಟ್ಟದ ಗಣಿತಾಧ್ಯಯನ ಮಾಡದಿದ್ದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಭೂತ ತತ್ವಗಳನ್ನು ಕರಗತಮಾಡುವುದು ಕಷ್ಟವಾಗುತ್ತದೆ. ಇದಲ್ಲದೆ, ಗಣಿತಶಾಸ್ತ್ರದ ಅಧ್ಯಯನದಿಂದ ವಿಶ್ಲೇಷಣಾ ಮನೋಭಾವ ಬೆಳೆಯುತ್ತದೆ. ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಅಭ್ಯಸಿಸುವ ವಿದ್ಯಾರ್ಥಿಗಳ ಸಂಖ್ಯೆಗಳನ್ನು ಹೆಚ್ಚಿಸುವುದು ದೇಶದ ಸರ್ವತೋಮುಖ ಪ್ರಗತಿಗೆ ಅನಿವಾರ್ಯವೆಂಬುದನ್ನು ಸರಕಾರ ಈಗಾಗಲೆ ಗುರುತಿಸಿರುತ್ತದೆ. ಮಾತ್ರವಲ್ಲ, ಈ ಸಂಖ್ಯೆಯನ್ನು ಹೆಚ್ಚಿಸಲು ಸರಕಾರ ಹಲವಾರು ಯೋಜನೆಗಳನ್ನು ಕೂಡಾ ಜಾರಿಗೆ ತಂದಿರುವುದು ಗಮನಾರ್ಹ ವಿಷಯ.

ಅನ್ವೇಷಣೆಯ ಮೂಲಕ ಅಧ್ಯಯನ : ಇದು ವಿದ್ಯೋಪಾಸನದ ಗುರಿ

ಸಾರ್ವಜನಿಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಕ್ಕೋಸ್ಕರ ವಿದ್ಯೋಪಾಸನಾ ಎಜುಕೇಶನ್ ಟ್ರಸ್ಟ್ ಕೆಳಗೆತೋರಿಸಿದ ಪ್ರಯತ್ನಗಳನ್ನು ಮಾಡಲು ನಿರ್ಧರಿಸಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಗಣಿತಾಭ್ಯಾಸದ ಕುತೂಹಲವನ್ನು ಕೆರಳಿಸಿವುದರಮೂಲಕ, ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಹಲವಾರು ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬಹುದೆಂಬುದು ನಮ್ಮ ನಿಲುಮೆ. ಈ ನಿಲುಮೆಯನ್ನು ಅನುಷ್ಠಾನಕ್ಕೆ ತರಲು ತಕ್ಕುದಾದ ಪ್ರಯೋಗ ಶಾಲೆಯ ಸೌಕರ್ಯಗಳನ್ನು ಒದಗಿಸಲು ಪ್ರಯತ್ನ ಪಡುತ್ತಿರುತ್ತೇವೆ. ಮಕ್ಕಳಿಗೆ ಸ್ವತ: ಪ್ರಯೋಗಗಳನ್ನು ಮಾಡಲು ಪ್ರೇರೇಪಿಸುತ್ತೇವೆ. ಪ್ರಯೋಗಗಳಿಂದ ದೊರಕಿದ ಫಲಿತಾಂಶಗಳನ್ನು ಗಣಿತದ ತತ್ವಗಳನ್ನರಿಯಲು ಉಪಯೋಗಿಸಲಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ, ಇಲ್ಲಿ ಗಣಿತಾಭ್ಯಾಸವನ್ನು ವಿಜ್ಞಾನದ ಮಾಧ್ಯಮದ ಮೂಲಕ ಕಲಿಸಲಾಗುತ್ತಿದೆ. ಇದರಿಂದ, ಗಣಿತಾಭ್ಯಾಸ ಮಾತ್ರವಲ್ಲದೆ, ವೈಜ್ಞಾನಿಕ ಮೂಲತತ್ವಗಳ ಗಾಢವಾದ ಅರಿವು ಮಕ್ಕಳಿಗೆ ಸಿಗುವುದಕ್ಕೆ ಬೇಕಾದಷ್ಟು ಅವಕಾಶವಿದೆ. ಪ್ರಕೃತಿಯ ತತ್ವಗಳನ್ನು ಭೋದಿಸುವ ಪುಸ್ತಕವು ಗಣಿತ ಭಾಷೆಯಲ್ಲಿ ಬರೆಯಲ್ಪಟ್ಟಿದೆ! ಎಂದು ೧೬ನೇ ಶತಮಾನದ ಪ್ರಖ್ಯಾತ ವಿಜ್ಞಾನಿ ಗೆಲಿಲಿಯೋ ಉದ್ಗರಿಸಿದರು. ಗಣಿತ ಮತ್ತು ವಿಜ್ಞಾನಕ್ಕಿರುವ ಅನ್ಯೋನ್ಯ ಸಂಬಂಧಗಳನ್ನು ಈ ಹೇಳಿಕೆ ಒತ್ತಿ ಹೇಳುತ್ತದೆ. ನಾವು ಅಳವಡಿಸುವ ಶಿಕ್ಷಣ ಪದ್ಧತಿಯ ವಿಧಾನ ಗೆಲಿಲಿಯೋ ಹೇಳಿರುವ ಮಾತಿನ ಅರ್ಥವನ್ನು ಪ್ರತಿಬಿಂಬಿಸುತ್ತದೆ.

ಶಿಕ್ಷಣ ಪದ್ಧತಿಯ ವಿಕಾಸ : ಸಮಾಜದ ವಿಕಾಸ

ಮೇಲೆ ಹೇಳಿದ ಶಿಕ್ಷಣ ಪದ್ಧತಿಯ ವಿಧಾನಗಳಿಂದ, ಕೆಲವು ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಬಹುದು. 

೧. ಗಣಿತ ಮತ್ತು ವಿಜ್ಞಾನಗಳಲ್ಲಿ ದೃಢವಾದ ತಳಹದಿಯನ್ನು ಹಾಕಿ ವಿದ್ಯಾರ್ಥಿಗಳಲ್ಲಿ ಪರಿಶೋಧನಾತ್ಮಕ ಕುತೂಹಲವನ್ನು ಕೆರಳಿಸುವುದರ ಮೂಲಕ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಉನ್ನತ ಶಿಕ್ಷಣಗಳನ್ನು ಪಡೆಯುವುವಲ್ಲಿ ಹಿಂಜರಿಯುವುದಿಲ್ಲ.

೨. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದರ ಮೂಲಕ ಸಬಲೀಕರಣದ ಪ್ರಜ್ಞೆಯನ್ನು ಮೂಡಿಸಲಾಗುತ್ತದೆ.

೩. ವಿದ್ಯಾಭ್ಯಾಸದ ಗುಣಮಟ್ಟದಲ್ಲಿ ಪ್ರಗತಿ ಕಂಡು ಬಂದರೆ, ಜನಸಾಮಾನ್ಯರು, ಮಕ್ಕಳನ್ನು ಸರಕಾರಿ ಶಾಲೆಗೆ

ಕಳುಹಿಸುವುದರಲ್ಲಿ ಹಿಂಜರಿಯುವುದಿಲ್ಲ. ಇದರಿಂದಾಗಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳು ಕಂಡು ಬರುವ ಸಂಭವಗಳಿವೆ.